ಗದಗ ನಾಲ್ವರ ಹತ್ಯೆ ಕೇಸ್; ಸ್ಥಳ ಮಹಜರು ಮಾಡುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ! ಆರೋಪಿ ಕಾಲಿಗೆ ಗುಂಡೇಟು

A2 ಆರೋಪಿ ಕಾಲಿಗೆ ಗುಂಡೇಟು

ಗದಗ, ಏ 29: ಕಳೆದ ವಾರ ಗದಗನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರರನ್ನು ನಡು ರಾತ್ರಿಯಲ್ಲಿ ಕತ್ತು ಸೀಳಿದ ಘಟಣೆ ಇಡೀ ರಾಜ್ಯವೇ ಬೆಚ್ಚಿ ಬಿಳೀಸಿತ್ತು. ಇದೇ ಘೋರ ಪ್ರಕರಣವನ್ನು ಭೇದಿಸುವಲ್ಲಿ ಫೀಲ್ಡಿಗೆ ಇಳಿದಿದ್ದ ಪೋಲಿಸರು 72 ಘಂಟೆಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ 8 ಜನ ಆರೋಪಿಗಳನ್ನು ಬಂಧಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ A2 ಆರೋಪಿ ಪೈರೋಜನನ್ನು  ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗುವ ಸಂದರ್ಭದಲ್ಲಿ ಪೈರೋಜ್ ಕಾಲಿಗೆ ಗುಂಡೇಟು ಹಾರಿಸಲಾಗಿದೆ.

ಒಂದೇ ಕುಟುಂಬದ ನಾಲ್ವರು ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಸ್ಥಳ ಮಹಜರು ಮಾಡಲು A2 ಆರೋಪಿ ಪೈರೋಜನನ್ನು ಕರೆದುಕೊಂಡು ಹೋದ ವೇಳೆಯಲ್ಲಿ ಆರೋಪಿ ಪರಾರಿಯಾಗಲು ಗದಗ ಗ್ರಾಮೀಣ ಪೋಲೀಸ್ ಠಾಣೆ ಪಿಎಸ್ಐ ಶಿವಾನಂದ ಪಾಟೀಲ ಮೇಲೆ ಬಿಯರ ಬಾಟಲಿಯಿಂದ ಹಲ್ಲೆ ಮಾಡಲು ಯತ್ನಿಸಿದ ವೇಳೆ ಪ್ರಾಣ ರಕ್ಷಣೆಗಾಗಿ ಪಿಎಸ್ಐ ಶಿಂಧೆರಿಂದ ಪೈರೋಜ ಕಾಲಿಗೆ ಗುಂಡು ಹಾರಿಸಲಾಗಿದೆ.

ಇನ್ನು ಪಿಎಸ್ಐ ಶಿವಾನಂದ್ ಪಾಟೀಲ ತಲೆಗೆ ಗಂಭೀರ್ ಗಾಯವಾಗಿದ್ದು, ಮತ್ತು ಕಾಲಿಗೆ ಗುಂಡೇಟು ಹೊಡೆದಿದರಿಂದ ಆರೋಪಿಯನ್ನು ಚಿಕಿತ್ಸೆಗಾಗಿ ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.