ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ  ಯುವಕನನ್ನು ಕೊಚ್ಚಿ ಕೊಲೆ ಮಾಡಿದ ಗ್ಯಾಂಗ್.

ಕೊಲೆಯಾದ ಆಕಾಶ

ಇತ್ತೀಚೆಗೆ ಯುವಕರು ಶೋಕಿಗಾಗಿ ಲಾಂಗು ಮಚ್ಚು ಹಿಡಿದು ಸಣ್ಣ ಪುಟ್ಟ ಕಾರಣಗಳಿಗೂ ಸಹ ಗಲಾಟೆ, ಕೊಲೆ ಅಂತ ಪ್ರಕರಣಗಳಲ್ಲಿ ಜೈಲು ಸೇರಿ ತಮ್ಮ ಅಮೂಲ್ಯವಾದ ಜೀವನಕ್ಕೆ ಸ್ವತಃ ತಾವೇ ಕೊಳ್ಳಿ ಇಟ್ಟುಕೊಳ್ಳುತ್ತಿದ್ದಾರೆ. ಇದೇ ವಿಚಾರಕ್ಕೆ ನಿನ್ನೆ ನಡೆದ ಅಂಬೇಡ್ಕರ ಜಯಂತಿಯ ಮೆರವಣಿಗೆಗೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋದ ಆಕಾಶ ಎಂಬ ಅಪ್ರಾಪ್ತ ವಯಸ್ಸಿನ ಬಾಲಕ ನಿಗೂಢ ಕೊಲೆಯಾಗಿ ಹೆಣವಾದ.

ಕಲಬುರ್ಗಿ: ಹೌದೂ ನಿನ್ನೆ ದಿನ ಅಂಬೇಡ್ಕರ ಜಯಂತಿ ನಿಮಿತ್ಯ ದೇಶದೆಲ್ಲೆಡೆ ವಿಜೃಂಬನೆಯಿಂದ ಮೆರವಣಿಗೆ, ಕಾರ್ಯಕ್ರಮ, ಪೂಜೇ ಅಂತ ಎಲ್ಲೆಡೆ ನಡೆದಿತ್ತು, ಹಾಗೇ ಬಿಸಿಲು ನಾಡು ಕಲಬುರ್ಗಿಯಲ್ಲು ಕೂಡ ಸಡಗರದ ಮೆರವಣಿಗೆ ನಡೆದಿತ್ತು. ಆದರೆ ಅದೇ ಮೆರವಣಿಗೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಯುವಕರ ತಂಡವೊಂದು ಕೊಚ್ಚಿ ಕೊಲೆಮಾಡಿ ರಕ್ತ ಹರಿಸಿದ್ದಾರೆ. ಕೇವಲ 20 ವರ್ಷದ ಯುವಕನ ಕೊಲೆ ನೋಡಿದ ಕಲಬುರ್ಗಿ ಜನತೆ ಬೆಚ್ಚಿ ಬಿದ್ದಿದ್ದಾರೆ.  ಅಶೋಕ ನಗರದ ಜೇವರ್ಗಿ ಕ್ರಾಸ್ ನ ರಾಷ್ಟ್ರಪತಿ ಚೌಕ್ ಹತ್ತಿರ ಮೆರವಣಿಗೆ ಬಂದಾಗ ನಾಲ್ಕೂ ಜನರ ತಂಡವೊಂದು ಏಕಾಏಕಿ ಬೈಕ್ ಮೂಲಕ ನುಗ್ಗಿ ಆಕಾಶ ಎಂಬ ಯುವಕನನ್ನು ಮನಬಂದಂತೆ ನಡು ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕಲಬುರ್ಗಿಯ ಅಶೋಕ ನಗರದ ಯುವಕರ ತಂಡ ಕೂಡ ಅಂಬೇಡ್ಕರ ಜಯಂತಿಯ ಮೆರವಣಿಗೆ ಆಯೋಜಿಸಿತ್ತು, ಇದೇ ಮೆರವಣಿಗೆಯಲ್ಲಿ ಆಕಾಶ ಎಂಬ ಅಪ್ರಾಪ್ತನನ್ನು ಕೊಚ್ಚಿ ನಡು ಬೀದಿಯಲ್ಲಿ ಜೀವಾ ತೆಗೆಯಲಾಗಿದೆ.ನಡು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕಾಶನನ್ನು ಆಸ್ಪತ್ರೆಗೆ ರವಾನಿಸುವಷ್ಟರಲ್ಲಿ ಆಕಾಶನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಘಟನೆಯಲ್ಲಿ ಇನ್ನೋರ್ವ ಯುವಕನಿಗೂ ಕೂಡ್ ಗಾಯವಾಗಿದೆ, ಆದರೆ ಏನೇ ಆಗಲಿ ಆಕಾಶ ಇನ್ನು ಬಾಳಿ ಬದುಕಬೇಕಿದ್ದ ಯುವಕ. ಇಂತಹ ದುರ್ಘಟನೆಗೆ ಬಲಿಯಾಗಲು ನಿಖರ ಕಾರಣ ತಿಳಿದುಬಂದಿಲ್ಲ. ಆಕಾಶ ಏರಿಯಾದಲ್ಲಿ ಒಳ್ಳೆ ಹುಡುಗ ಎಸೆಸೆಲ್ಸಿ ಮುಗಿಸಿ ಎರಡು ವರ್ಷ ಆದರು, ಕಾಲೇಜು ಮೆಟ್ಟಿಲು ಏರಿರಲಿಲ್ಲ ಇತ್ತ ತಂದೆ ಆಟೋ ಚಾಲಕ ಹೇಗೋ ಆಟೋ ಚಲಾವಣೆ ಮಾಡಿ ಬಂದ ಹಣದಲ್ಲಿ ತನ್ನ ಬಡ ಕುಟುಂಬವನ್ನು ಸಾಗಿಸುತ್ತಿದ್ದ ಆದರೆ ವಿಧಿಯೇ ಬೇರೆ ಇತ್ತು ಮಗ ಮೆರವಣಿಗೆಯಲ್ಲಿ ಭಾಗಿಯಾಗುತ್ತೇನೆಂದು ಹೋದ ಮರಳಿ ಹೆಣವಾಗಿ ಬಂದ.

ಕೊಲೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ ಪೋಲೀಸರು ಆರೋಪಿಗಳ ಹೆಡೆಮುರಿ ಕಟ್ಟಿ ತನಿಖೆ ನಡೆಸಿದ ನಂತರ ಕಾರಣ ತಿಳಿದುಬರಬೇಕಿದೆ