ಬೇಸಿಗೆಯ ತಾಪಕ್ಕೆ ನದಿಗಳು ಬತ್ತಿ ಹೋಗುತ್ತಿದ್ದು, ನದಿಗಳಲ್ಲಿ ನೀರಿಲ್ಲದೆ ನೀರನ್ನು ಅರಸಿ ಮೊಸಳೆಗಳು ಹೊಲಗಳಲ್ಲಿ, ನದಿಯ ದಡದಲ್ಲಿ ಪ್ರತ್ಯಕ್ಷವಾಗುತ್ತಿವೆ.
ಗೋಕಾಕ: ಹೌದೂ ಮೊನ್ನೆ ತಾನೆ ಕೃಷ್ಣಾ ನದಿಯ ದಡದಲ್ಲಿರುವ ಕಬ್ಬಿಣ ಗದ್ದೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು. ಆದರೆ ಈಗ ಧೂಪದಾಳ ಗ್ರಾಮದ ಘಟಪ್ರಭಾ ನದಿಯ ದಡದಲ್ಲಿ ಭಾರಿ ಗಾತ್ರದ ಮೊಸಳೆ ಒಂದು ಪ್ರತ್ಯಕ್ಷ ವಾಗಿದ್ದು. ಸಾರ್ವಜನಿಕರು ಹಾಗೂ ನದಿಯ ಪಾತ್ರದ ಜನರು ನದಿಗೆ ತೆರಳುವ ಮುನ್ನ ಎಚ್ಚರಿಕೆಯಿಂದ ಹೋಗಬೇಕು. ಇನ್ನು ಈ ಮಾಹಿತಿಯನ್ನು ಧೂಪದಾಳ ಗ್ರಾಮದ ಯುವಕ ಸಚಿನ ಮೊಸಳೆಯನ್ನು ಪ್ರತ್ಯಕ್ಷವಾಗಿ ನೋಡಿದ್ದು ತಕ್ಷಣ ಮೊಸಳೆ ಇರುವುದರ ಬಗ್ಗೆ ಸಾರ್ವಜನಿಕರಿಗೆ ಜಾಗೂರಕತೆಯ ಮಾಹಿತಿ ತಿಳಿಸಿದ್ದಾನೆ.