ಕರ್ನಾಟಕ ರಾಜ್ಯ ಜೂನಿಯರ್ ಲಂಗಡಿ(ಕುಂಟಾಟ) ತಂಡದ ಆಯ್ಕೆ ಪ್ರಕ್ರಿಯೆ..

ಕುಗನೋಳಿ : 12 ನೇ ಜೂನಿಯರ್ ರಾಷ್ಟ್ರ ಮಟ್ಟದ ಬಾಲಕರ ಮತ್ತು ಬಾಲಕಿಯರ ಲಂಗಡಿ(ಕುಂಟಾಟ)  ಚಾಂಪಿಯನಶೀಪ್  ದಿನಾಂಕ 01 ರಿಂದ 03 ಮೇ 2024 ರವರೆಗೆ ರಾಜಸ್ತಾನದ ಜೋಧಪುರನಲ್ಲಿ ನಡೆಯಲಿದೆ.

ಈ ರಾಷ್ಟ್ರೀಯ ಚಾಂಪಿಯನಶಿಪಗಾಗಿ ಕರ್ನಾಟಕ ರಾಜ್ಯ ಜೂನಿಯರ್ ಲಂಗಡಿ(ಕುಂಟಾಟ) ಬಾಲಕ ಮತ್ತು ಬಾಲಕಿಯರ ತಂಡದ ಆಯ್ಕೆ ಮಾಡಲಾಗುವುದು. ಆಯ್ಕೆ ಪ್ರಕ್ರಿಯೆ ರವಿವಾರ ದಿನಾಂಕ 18 ಫೆಬ್ರುವರಿ ರಂದು ಮುಂಜಾನೆ ಸರಿಯಾಗಿ 11 ಘಂಟೆಗೆ ಸೈನಿಕ ವಸತಿ ಸಂಕೀರ್ಣ ಶಾಲೆ ಕುಗನೊಳಿ ತಾ! ನಿಪ್ಪಾಣಿ ಜಿ! ಬೆಳಗಾವಿ ಇಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಶ್ರೀ ಎಂ ಕೆ ಶಿರಗುಪ್ಪಿ ಪ್ರಧಾನ್ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಲಂಗಡಿ (ಕುಂಟಾಟ)  ಅಸೋಶಿಯೇಶನ್ 9341732259