ಬಿಸಿಲಿನ ತಾಪಕ್ಕೆ; ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳ ಸಮಯ ಬದಲಾವಣೆ.

ಸಾಂದರ್ಭಿಕ ಚಿತ್ರ

ರಾಜ್ಯದಲ್ಲೆಡೆ  ರಣ ಬಿಸಿಲಿಗೆ ತತ್ತರಿಸುತ್ತಿರುವ ಜನತೆ ವಿಪರೀತ ಬಿಸಿಲಿಗೆ ಹೊರಬರಲು ಸಾಧ್ಯವಾಗದೆ ಜನ ವದ್ದಾಡುತ್ತಿದ್ದು, ಇನ್ನೂ ಪುಟ್ಟ ಕಂದಮ್ಮಗಳ ಗತಿ ಏನು..? ವಿಪರೀತ ಬಿಸಿಲಿಗೆ ಈಗಾಗಲೇ ಕಲ್ಯಾಣ್ ಕರ್ನಾಟಕ ಭಾಗದ ಅಂಗನವಾಡಿ ಕೇಂದ್ರಗಳ ಸಮಯ ಬೆಳಿಗ್ಗೆ 8 ರಿಂದ 12 ಗಂಟೆ ವರೆಗೆ ನಿಗದಿಪಿಸಲಾಗಿತ್ತು, ಅದೇ ರೀತಿ ರಾಜ್ಯದಲ್ಲಿ ಬಿಸಿಲಿನ್ ತಾಪ್ ಹೆಚ್ಚಾಗಿದರಿಂದ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲು ಮನವಿ ಮಾಡಿದ ಹಿನ್ನೆಲೆ, ಏಪ್ರಿಲ್ 15 ರಿಂದ ಮೇ 10 ರವರೆಗೆ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳ ಸಮಯ ಬೆಳಿಗ್ಗೆ 8 ರಿಂದ 12 ಗಂಟೆ ವರೆಗೆ ವಿಸ್ತರಿಸಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಅಂಗನವಾಡಿ ಕೇಂದ್ರಗಳಿಗೆ ಮಾತ್ರ ಬೆಳಿಗ್ಗೆ 8 ರಿಂದ 12 ಗಂಟೆ ವರೆಗೆ ಸಮಯ ನಿಗದಿ ಮಾಡಲಾಗಿತ್ತು. ಈದಿಗ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳ ಸಮಯ ಬೆಳಿಗ್ಗೆ 8 ರಿಂದ 12 ರವರಿಗೆ ವಿಸ್ತರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ಈ ಆದೇಶವು ಏಪ್ರಿಲ್ 15 ರಿಂದ ಮೇ 10ರ ವರೆಗೆ ವಿಸ್ತರಿಸಲಾಗಿದ್ದು ಅಂಗನವಾಡಿ ಸಿಬ್ಬಂದಿಗಳಿಗೆ ಮೇ 11 ರಿಂದ 26ರ ವರೆಗೆ ಬೇಸಿಗೆ ರಜೆ ನೀಡಲಾಗಿದೆ ಮೇ 27 ರಿಂದ ಅಂಗನವಾಡಿ ಕೇಂದ್ರಗಳು ಎಂದಿನಂತೆ ಪ್ರತಿದಿನ ಬೆಳಿಗ್ಗೆ 9:30 ರಿಂದ ಸಾಯಂಕಾಲ 4:00 ವರೆಗೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.