ಗೃಹಲಕ್ಷ್ಮಿ ಯೋಜನೆ ಹಣವನ್ನು ಸಂಗ್ರಹಿಸಿ ಫ್ರಿಡ್ಜ್ ಖರೀದಿ ಮಾಡಿದ ಹಾವೇರಿ ಮಹಿಳೆ..!

ಖರೀದಿಸಿದ ಫ್ರಿಡ್ಜ್ ಅನ್ನು ಪೂಜೆ ಮಾಡುತ್ತಿರುವ ಮಹಿಳೆ

ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಗ್ರಹಲಕ್ಷ್ಮಿ ಯೋಜನೆ ಅಡಿ ಪ್ರತಿ ಮನೆ ಒಡತಿಗೆ ರೂ. 2000 ಹಣವನ್ನು ನೀಡುತ್ತಿದ್ದು. ಈ ಹಣವನ್ನು ಸರಿಯಾಗಿ ಸದುಪಯೋಗ ಮಾಡಿಕೊಂಡು ಹಾವೇರಿ ಜಿಲ್ಲೆಯ ಶಿಗ್ಗಾವಿ ನಗರದಲ್ಲಿ ಮಹಿಳೆಯೊಬ್ಬರು  ಫ್ರಿಡ್ಜ್ ಖರೀದಿ ಮಾಡುವ ಮೂಲಕ ಗ್ರಹಲಕ್ಷ್ಮಿ ಯೋಜನೆಯ ಹಣವನ್ನು ಸರಿಯಾಗಿ ಸದುಪಯೋಗ ಮಾಡಿಕೊಂಡಿದ್ದಾರೆ.

ಹೌದು ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರಾಜ್ಯದ ಪ್ರತಿ ಮನೆಯ ಒಡತಿಗೆ 2000 ರೂ. ಗೃಹಲಕ್ಷ್ಮಿ ಯೋಜನೆ ಅಡಿ ನೀಡುತ್ತಾ ಬಂದಿದ್ದು ಈ ಯೋಜನೆಯ ಫಲಾನುಭವಿ ಒಬ್ಬರಾದ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಲತಾ ಎಂಬುವರು ತಮಗೆ ಬರುತ್ತಿದ್ದ ಗ್ರಹಲಕ್ಷ್ಮಿ ಯೋಜನೆಯ 2000 ರೂ. ಹಣವನ್ನು ಕೂಡಿಟ್ಟು 17,500 ಬೆಲೆ ಬಾಳುವ ಫ್ರಿಡ್ಜ್ ಅನ್ನು ಖರೀದಿ ಮಾಡಿದ್ದಾರೆ.

ಪ್ರತಿ ತಿಂಗಳು 2,000ಗಳನ್ನು ಕೂಡಿಟ್ಟುಕೊಂಡು ಯುಗಾದಿ ಹಬ್ಬಕ್ಕೆ ಫ್ರಿಡ್ಜ್ ಖರೀದಿ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರಿಯಾಗಿ ಉಪಯೋಗಿಸಿಕೊಂಡ ಫಲಾನುಭವಿ ಯಾಗಿದ್ದಾರೆ. ನಂತರ ಫ್ರಿಡ್ಜ್ ಅನ್ನು ಪೂಜೆ ಮಾಡಿದ ಕೂಡಲೇ ಫ್ರಿಡ್ಜ್ ಮೇಲೆ ಗೃಹಲಕ್ಷ್ಮಿ ಫಲಾನುಭವಿ ಎಂದು ಹೆಸರನ್ನು ಬರೆಸಿದ್ದಾರೆ.