ಬಡ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸುವರ್ಣ ಅವಕಾಶ ಆಟದ ಜೊತೆಗೆ ಪಾಠಕ್ಕೂ ಪ್ರಾಮುಖ್ಯತೆ ನೀಡುವ ಕಾಲೇಜು ಇದಾಗಿದ್ದು, ರಾಜ್ಯದ ಕ್ರೀಡಾ ನಿಲಯಗಳ ಪೈಕಿ SDM ಉಜಿರೆ ಕ್ರೀಡಾ ವಸತಿ ಶಾಲೆ ಕೂಡ ಒಂದು. ಇಲ್ಲಿ ತರಬೇತಿ ಪಡೆದಂತ ಹಲವಾರು ಕ್ರೀಡಾಪಟುಗಳು ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಪದಕ ಪಡೆದು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೂ ರಾಜ್ಯ ರಾಷ್ಟ್ರಕ್ಕೆ ಉತ್ತಮ ಕ್ರೀಡಾಪಟುಗಳ ಕೊಡುಗೆ ನೀಡಿದ ಹೆಗ್ಗಳಿಕೆ ಈ ಕಾಲೇಜಿನ ಹೆಮ್ಮೆಯಾಗಿದೆ.
ಉಜಿರೆ: ಪರಮಪೂಜ್ಯ ಡಾ! ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಸ್ ಡಿ ಎಂ ಕ್ರೀಡಾ ಹಾಸ್ಟೆಲ್ 2024-25 ನೇ ಶೈಕ್ಷಣಿಕ ವರ್ಷದ ಕ್ರೀಡಾ ವಿದ್ಯಾರ್ಥಿ ನಿಲಯಕ್ಕೆ ಶಿಬಿರ ಹಮ್ಮಿಕೊಂಡಿದ್ದು, ಪದವಿ ವಿದ್ಯಾರ್ಥಿಗಳಿಗೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಎರಡು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ಮಾಡುತ್ತಿದ್ದು ಈ ಆಯ್ಕೆ ಶಿಬಿರವನ್ನು ಸದುಪಯೋಗ ಪಡೆದುಕೊಳ್ಳಬೇಕು.
ಆಯ್ಕೆ ನಡೆಯುವ ಕ್ರೀಡೆಗಳು
- ಅಥ್ಲೆಟಿಕ್ಸ್
- ಕಬಡ್ಡಿ
- ವ್ಹಾಲಿಬಾಲ
- ಲಿಫ್ಟಿಂಗ್
- ಹ್ಯಾಂಡ ಬಾಲ್
- ಸಾಫ್ಟ್ ಬಾಲ್
- ನೆಟ್ ಬಾಲ್
- ಬ್ಯಾಡ್ಮಿಂಟನ್