ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾನ್ ಎಂಬ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ 2 ವರ್ಷದ ಮಗುವನ್ನು ನಿರಂತರ 20 ಘಂಟೆಗಳ ಹಗಲು ರಾತ್ರಿ ಕಾರ್ಯಾಚರಣೆ ಮಾಡಿದ ಸಿಬ್ಬಂದಿ. ಜೀವಂತವಾಗಿ ಹೊರತೆಗೆದು ಯಶಸ್ವಿ.
ವಿಜಯಪುರ: ನಿನ್ನೆ ದಿನ ಬುಧವಾರ ಕೊಳವೆ ಬಾವಿಯಲ್ಲಿ ಬಿದ್ದಿದ 2 ವರ್ಷದ ಸಾತ್ವಿಕ್ ಎಂಬ ಮಗುವನ್ನು ನಿರಂತರ ಪರಿಶ್ರಮದಿಂದ ಇಂದು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. 16 ಅಡಿ ಕೆಳಗೆ ತಲೆ ಕೆಳಗಡೆ ಮಾಡಿ ಬಿದ್ದಿದ್ದ ಸಾತ್ವಿಕ ಯಶಸ್ವಿ ರಕ್ಷಣೆ.
ಸಾತ್ವಿಕ ಮಗುವಿನ ಜೀವಂತ ಹೊರಬರಲು ನಿರಂತರ ರಕ್ಷಣೆಯಲ್ಲಿ ಅಗ್ನಿಶಾಮಕ, SDRF ತಂಡದ ಯಶಸ್ವಿ ಕಾರ್ಯಾಚರಣೆಗೆ ಗ್ರಾಮದ ಗ್ರಾಮಸ್ಥರು, ಹಾಗೂ ಇಡೀ ರಾಜ್ಯದ ಜನತೆ ಅಭಿನಂದನೆ ಮಹಾಪೂರ ಸಲ್ಲಿಸಿದ್ದಾರೆ. ಸಾತ್ವಿಕನನ್ನು ಇಂಡಿ ತಾಲೂಕಾ ಆಸ್ಪತ್ರಗೆ ರವಾನೆ.