ಅಥಣಿ: ಖಿಳೇಗಾಂವ PKPS ಅಧ್ಯಕ್ಷನನ್ನು ನಡು ರಸ್ತೆಯಲ್ಲಿ  ಭೀಕರ ಹತ್ಯೆ ಮಾಡಿದ ದುಷ್ಕರ್ಮಿಗಳು.

ಕೊಲೆಯಾದ ಅಣ್ಣಪ್ಪ ನಿಂಬಾಳ

ಅಥಣಿ: ಖಿಳೇಗಾಂವ ಗ್ರಾಮದ ಕಾಂಗ್ರೆಸ್ಸ್ ಮುಖಂಡ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ 58 ವರ್ಷದ ಅಣ್ಣಪ್ಪ ನಿಂಬಾಳ ಎಂಬುವರನ್ನು ನಿನ್ನೆ ಸಂಜೆ ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಕೊಚ್ಚಿ ಕೊಲೆಮಾಡಿದ್ದಾರೆ.

ಅಣ್ಣಪ್ಪ ನಿಂಬಾಳ ಇವರು ನಿನ್ನೆ ಸಂಜೆ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಹೋಗಿಬರುವಾಗ 5 ರಿಂದ 6 ಜನರ ಗುಂಪೊಂದು ಅಣ್ಣಪ್ಪ ಅವರ್ ಮೇಲೆ ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಕೊಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಣ್ಣಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೈ ಚೆಲ್ಲಿದ್ದಾರೆ.

ಅಣ್ಣಪ್ಪ ಅವರ್ ಕೊಲೆಯ ಹಿಂದಿನ  ನಿಖರ ಮಾಹಿತಿ ತಿಳಿದು ಬಂದಿಲ್ಲವಾದ್ದರು ಮೇಲ್ನೋಟಕ್ಕೆ ಇದು ರಾಜಕೀಯ ದ್ವೇಶವೆಂದು ಅಂದಾಜಿಸಲಾಗಿದೆ. ಸುದ್ದಿ ತಿಳಿದ ಬಳಿಕ ಮಾಜಿ ಡಿಸಿಎಂ ಸವದಿಯವರು ಆಸ್ಪತ್ರೆಗೆ ಬೇಟಿ ನೀಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.