ಬೆಳಗಾವಿ: ಎರಡು ಬೈಕ್ ನಡುವೆ ಭೀಕರ ಅಪಘಾತ:  ಸ್ಥಳದಲ್ಲೆ ಇಬ್ಬರ ಸಾವು.

ಸಾಂದರ್ಭಿಕ ಚಿತ್ರ

ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಅಪಘಾತಗಳಿಂದ ಅನೇಕ ಸಾವುಗಳು ಸಂಭವಿಸುತ್ತಲೇ ಇದೆ ಈಗ ರಾಮದುರ್ಗ ತಾಲೂಕಿನ ರೇವಡಿಕೊಪ್ಪ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಬೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಇಬ್ಬರ ದುರ್ಮರಣಕೀಡಾಗಿದ್ದಾರೆ.

ಬೆಳಗಾವಿ: ರಾಮದುರ್ಗ ತಾಲೂಕಿನ ರೇವಡಿಕೊಪ್ಪ ಬಳಿ ಎರಡು ಬೈಕ್ ನಡುವೆ ಭೀಕರ ಅಪಘಾತ  ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ರೇವಡಿಕೊಪ್ಪ ಗ್ರಾಮದ ಬಳಿ ಘಟನೆ ನಡೆದಿದ್ದು, ಕೊಳಚಿ ಗ್ರಾಮದ ವೆಂಕನಗೌಡ ಪಾಟೀಲ್ (50), ಹಾಗೂ ಲಕ್ಕನಾಯಕನಕೊಪ್ಪ ಗ್ರಾಮದ ಪ್ರಮೋದ್ ಕುಂಬಾರ್ (18 ) ಸಾವು. ಮತ್ತಿಬ್ಬರು ಸವಾರರಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಯಲ್ಲಿ ದಾಖಲು.  ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.