ಇತಿಚ್ಚಿಗೆ ಕಾಲೇಜು ಶಾಲೆಗಳಿಗೆ ಬಂಕ್ ಮಾಡಿ ಪ್ರೀತಿ ಪ್ರೇಮ್ ಪ್ರಣಯ ಅಂತ ಸುತ್ತುತಿರುವ ಯುವಕ ಯುವತಿಯರು, ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿಯ ಬಲೆಗೆ ಬಿದ್ದು ತಮ್ಮ ಪ್ರಾಣಗಳನ್ನೆ ಕಳೆದುಕೊಂಡ ಉದಾಹರಣೆಗಳು ಕಣ್ಣೆದುರು ದಿನ ನಿತ್ಯ ನೋಡಿದರೂ ಸಹ ಮತ್ತೆ ಹಿಂತಹ ಗೋಜಿಗೇ ಹೋಗುವುದನ್ನು ಬಿಡಲ್ಲ ಅಂತಹದರಲ್ಲಿ ಹಾಸನ ಜಿಲ್ಲೆಯಲ್ಲಿ ಯುವಕ ಯುವತಿ ಆತ್ಮಹತ್ಯೆಗೆ ಯತ್ನಿಸಿ ಯುವಕ ಸಾವನ್ನಪ್ಪಿದ್ದಾನೆ.
ಹಾಸನ: ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದಾನೆ.
ಹೊಳೆನರಸಿಪುರ ತಾಲ್ಲೂಕಿನ, ನಗರನಹಳ್ಳಿ ಗ್ರಾಮದ ರಾಜು (24) ಮೃತ ಯುವಕ. ಈತ ಇದೇ ತಾಲ್ಲೂಕಿನ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ. ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದನು. ಆದರೆ ಪೋಷಕರು ಅಪ್ರಾಪ್ತೆ ಎನ್ನುವ ಕಾರಣಕ್ಕೆ ಮದುವೆಗೆ ನಿರಾಕರಿಸಿ ಆಕೆಗೆ ಬುದ್ದಿವಾದ ಹೇಳಿದ್ದರು.
ನಿನ್ನೆ ಮಧ್ಯಾಹ್ನ ಹೊಳೆನರಸೀಪುರ ಪಟ್ಟಣದ ಹೇಮಾವತಿ ನದಿ ಸೇತುವೆ ಬಳಿ ಇಬ್ಬರು ಒಟ್ಟಿಗೆ ವಿಷ ಸೇವಿಸಿದ್ದಾರೆ. ರೈಲ್ವೇ ಟ್ರ್ಯಾಕ್ ಮೇಲೆ ವಿಷ ಸೇವಿಸಿ ಮಲಗಿದ್ದಾರೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿ ನಗರಠಾಣೆ ಪಿಎಸ್ಐ ಅಜಯ್ ಕುಮಾರ್ ಹಾಗೂ ಸಿಬ್ಬಂದಿ ತಮ್ಮ ಜೀಪ್ನಲ್ಲೇ ಇಬ್ಬರನ್ನೂ ಕರೆತಂದು ಪಟ್ಟಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪ್ರೇಮಿಗಳನ್ನು ಹಾಸನದ ಹಿಮ್ಸ್ಗೆ ದಾಖಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಜು ಮೃತಪಟ್ಟಿದ್ದಾನೆ. ಅತ್ತ ಅಪ್ರಾಪ್ತೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ತಿಳಿದುಬಂದಿದೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.