30 ನೇ ಸಬ್‌ ಜೂನಿಯರ‌  ನ್ಯಾಶನಲ್  ಅಟ್ಯಾ ಪಟ್ಯಾ  ಚಾಂಪಿಯನ್‌ ಶಿಪ್‌: ಕ್ರೀಡಾ ಶಾಲೆಯ ವಿದ್ಯಾರ್ಥಿಗಳಿಗೆ ಬೆಳ್ಳಿಯ ಪದಕ 

ಪದಕ ವಿಜೇತ ಕ್ರೀಡಾಪಟುಗಳು, ತರಬೇತುದಾರರು ಹಾಗೂ ಪ್ರಾಚಾರ್ಯರು

ರಾಮದುರ್ಗ : ತಾಲೂಕಿನ ಚಂದರಗಿಯ ಎಸ್. ಎಂ. ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯ ಅಟ್ಯಾ ಪಟ್ಯಾ  ಕ್ರೀಡಾಪಟುಗಳು  ದಿನಾಂಕ 09-02-2024 ರಿಂದ 11-02-2024 ರ ವರೆಗೆ ಮಹಾರಾಷ್ಟ್ರದ ಶೇಗಾನ ನಲ್ಲಿ ನಡೆದ 30ನೇ ಸಬ್‌ ಜೂನಿಯರ್ ನ್ಯಾಶನಲ್‌ ಅಟ್ಯಾ ಪಟ್ಯಾ  ಚಾಂಪಿಯನ್‌ ಶಿಪ್‌ನಲ್ಲಿ  ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟದಲ್ಲಿ ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ. 

ಕ್ರೀಡಾಪಟುಗಳಾದ ಅರುಣ ಎಸ್‌ ಲಮಾಣಿ, ಉಳವೇಶ ಎಸ್‌ ಲಮಾಣಿ,ರೊಹಿತ್‌ ಆರ್‌ ಚೌವಾನ, ಶಿವಕುಮರ ಬಿ ಸಿಟಿಮನಿ, ನಿರಂಜನ ಸ್‌ ಬಾಕಾರಿ, ರಾಹುಲ ಎಸ್‌ ಶಿರೋಳ, ಶುಭಮ ಎಸ್‌ ನಂದೂರಕರ ಹಾಗೂ ತರಬೇತುದಾರರಾದ ಎಲ್.ಸಿ.ಲಮಾಣಿ ಇವರನ್ನು  ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕ ಮಂಡಳಿಯವರು, ಸಂಸ್ಥೆಯ ಆಡಳಿತಾಧಿಕಾರಿಗಳು, ಪ್ರಾಚಾರ್ಯರು, ಹಾಗೂ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.