ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ: ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ. ಜೂನ್ 4 ಫಲಿತಾಂಶ.

ಸಾಂದರ್ಭಿಕ ಚಿತ್ರ

ಲೋಕಸಭೆ ಚುನಾವಣೆಯ ಘೋಷಣೆ ದಿನಾಂಕಕ್ಕೆ ಮುಹೂರ್ತ ಫಿಕ್ಸ್. ದೇಶದ ಜನತೆಗೆ ಕೊನೆಗೂ ಚುನಾವಣ ಆಯೋಗ ದಿನಾಂಕ ಘೋಷಣೆ ಮಾಡಿ ಆದೇಶಿಸಿದೆ.

ದೆಹಲಿ : ದೆಹಲಿಯ ವಿಜ್ಞಾನ ಭವನದಲ್ಲಿ ಚುನಾವಣಾ ಆಯೋಗ ಸುದ್ದಿಗೋಷ್ಠಿ. ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ್ ಸುದ್ದಿಗೋಷ್ಠಿ,  ಕರ್ನಾಟಕ ಸೇರಿ ಎಲ್ಲ ರಾಜ್ಯಗಳ  543 ಕ್ಷೇತ್ರಗಳ ಚುನಾವಣೆ ಘೋಷಣೆ. 10 ಲಕ್ಷದ 5 ಸಾವಿರ ಮತಗಟ್ಟೆಗಳ ಸ್ಥಾಪನೆ. ದೇಶದಲ್ಲಿ 97 ಕೋಟಿ ಮತದಾರರು ಇದ್ದಾರೆ. ಒಟ್ಟು ಪುರುಷರು 49.7 ಕೋಟಿ ಮತದಾರರು. 47,1 ಕೋಟಿ ಮಹಿಳಾ ಮತದಾರರು. 1.8 ಕೋಟಿ ಮತದಾರರಿಂದ ಮೊದಲ ಬಾರಿಗೆ ಮತ ಚಲಾವಣೆ. 20 ರಿಂದ 29 ವರ್ಷದೊಳಗಿನ ಮತದಾರರು 19.74 ಲಕ್ಷ. 85 ವರ್ಷ ಮೇಲಿನವರು 82 ಕೋಟಿ ಜನ. 48 ಸಾವಿರ ತೃತೀಯ ಲಿಂಗಿ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಒಟ್ಟು 2.18 ಲಕ್ಷ 100 ವರ್ಷ ಮೆಲ್ಪಟ್ಟವರು ಮತ ಚಲಾಯಿಸಲಿದ್ದಾರೆ. ಮತದಾನಕ್ಕೆ ಒಟ್ಟು 55 ಲಕ್ಷ ಇವಿಎಂ ಗಳ ವ್ಯವಸ್ಥೆ. ಒಟ್ಟು ಚುನಾವಣಾ ಸಿಬ್ಬಂದಿ 1,50 ಕೋಟಿ.

ಚುನಾವಣೆ ದಿನಾಂಕಗಳು ಕೆಳಗಿನಂತಿವೆ

7 ಹಂತಗಳಲ್ಲಿ ಚುನಾವಣೆ ಘೋಷಣೆ.

ಮೊದಲನೆ ಹಂತ 19 ಏಪ್ರಿಲ್

ಎರಡನೆ ಹಂತ  26 ಏಪ್ರಿಲ್

ಮೂರನೆ ಹಂತ  07 ಮೇ

ನಾಲ್ಕನೇ ಹಂತ.  13 ಮೇ

ಐದನೇ ಹಂತ.     20 ಮೇ

ಆರನೇ ಹಂತ.     25 ಮೇ

ಏಳನೇ ಹಂತ       1 ಜೂನ್

ಫಲಿತಾಂಶ          4 ಜೂನ್

ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ಮೊದಲನೇ ಹಂತ 26 ಏಪ್ರಿಲ್, ಎರಡನೇ ಹಂತದ ಮತದಾನ 7 ಮೇ. ಲೋಕಸಭೆಯ ಎಲ್ಲಾ ಹಂತದ  ಫಲಿತಾಂಶ ಜೂನ್ 4 ರಂದು ಪ್ರಕಟ.