ರಾಜ್ಯ ಬಿಜೆಪಿಯಲ್ಲಿ ಸಿಟಿ ರವಿ, ಈಶ್ವರಪ್ಪ, ಪ್ರತಾಪ ಸಿಂಹ, ಡಿವಿಎಸ್ ಗಿಂತ ಅಷ್ಟೊಂದು  ಪವರಫುಲ್ಲಾ ಶೋಭಾ ಕರಂದ್ಲಾಜೆ..?

ಶೋಭಾ ಕರಂದ್ಲಾಜೆ

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕೆಲ ಬಿಜೆಪಿ ಹಿರಿಯ ಮುಖಂಡರು ಟಿಕೆಟಗಾಗಿ ಕೇಂದ್ರದ ವರಿಷ್ಠರ ದುಂಬಾಲು ಬಿದ್ದರೂ ಸಹ ಟಿಕೆಟ್ ವಂಚಿತರಾಗಿದ್ದಾರೆ ಕೆಲವು ನಾಯಕರಿಗೆ ಟಿಕೆಟ್ ಕೊಡುವ ಆಸೆಯನ್ನು ತೋರಿಸಿ ನಿರಾಶೆಯನ್ನು ಮಾಡಿದ್ದಾರೆ ಹೀಗಿರುವಾಗ ಶೋಭಾ ಕರಂದ್ಲಾಜೆ ಅವರು ತಾವು ಪ್ರತಿನಿಧಿಸುವ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರಕ್ಕೆ ಟಿಕೆಟ್ ಪಡೆಯಲು ಯಶಸ್ವಿಯಾಗಿರುವ ಗುಟ್ಟು ಏನಿರಬಹುದು..? ಎಂದು ರಾಜ್ಯದಲ್ಲಿ ಮನೆಮಾತಾಗಿದೆ.

ಹೌದೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಜ್ಯದ ಪ್ರಬಲ ನಾಯಕರು ಟಿಕೆಟಗಾಗಿ ಎಷ್ಟೇ ಲಾಭಿ ನಡೆಸಿದ್ದರು ಟಿಕೆಟ್ ವಂಚಿತರಾಗಿದ್ದಾರೆ. ಕೆಲ ನಾಯಕರಿಗೆ ಟಿಕೆಟ್ ನೀಡುವುದಾಗಿ ಆಶ್ವಾಸನೆ ನೀಡಿ ಕೊನೆ ಪಕ್ಷದಲ್ಲಿ ಟಿಕೆಟ್ ನಿರಾಕರಣೆಯಾಗಿದೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ವಿರೋಧ ಅಲೆ ಇದ್ದರೂ ಅಂತವರಿಗೆ ಟಿಕೆಟ್ ನೀಡಲಾಗಿದೆ.

ಬಿಜೆಪಿ ಟಿಕೆಟ್ ವಂಚಿತ ಪ್ರಮುಖ ನಾಯಕರು

ರಾಜ್ಯದ 8 ಹಾಲಿ ಸಂಸದರಿಗೆ ಟಿಕೆಟ್ ಮಿಸ

ರಾಜ್ಯದಲ್ಲಿ ಬಿಜೆಪಿಯ ಎಂಟು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ.ಮೈಸೂರು ಕೊಡಗು ಪ್ರತಾಪ್ ಸಿಂಹ, ಬೆಂಗಳೂರು ಉತ್ತರ ಡಿ ವಿ ಸದಾನಂದಗೌಡ, ಕೊಪ್ಪಳ ಕರಡಿ ಸಂಗಣ್ಣ, ಹಾವೇರಿ  ಉದಾಸಿ, ತುಮಕೂರು ಜಿಎಸ್ ಬಸವರಾಜ.(ನಿವೃತ್ತಿ) ದಕ್ಷಿಣ ಕನ್ನಡ ನವೀನ್ ಕುಮಾರ್ ಕಟೀಲ.ಚಾಮರಾಜನಗರ ಶ್ರೀನಿವಾಸ್ ಪ್ರಸಾದ(ನಿವೃತ್ತಿ) ಬಳ್ಳಾರಿ ದೇವೇಂದ್ರಪ್ಪ

ಮೈಸೂರು ಸಂಸದ ಪ್ರತಾಪ್ ಸಿಂಹ ಎರಡು ಬಾರಿ ಸಂಸದರಾಗಿ ಆಯ್ಕೆ ಆದರೂ ಕೂಡ ಬಿಜೆಪಿಯಿಂದ ಟಿಕೆಟ್ ಪಡೆಯುವಲ್ಲಿ ವಂಚಿತರಾಗಿದ್ದಾರೆ, ಅದೇ ರೀತಿ ಕೆ ಎಸ್ ಈಶ್ವರಪ್ಪ ಅವರ ಮಗನಿಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಹೇಳಿ ಕೊನೆ ಪಕ್ಷದಲ್ಲಿ ನಿರಾಕರಣೆ. ಇನ್ನು ಶೋಭಾ ಕರಂದ್ಲಾಜೆ ಅವರು ಪ್ರತಿನಿಧಿಸುವ ಕ್ಷೇತ್ರ ಚಿಕ್ಕಮಗಳೂರು ಉಡುಪಿ ಈ ಕ್ಷೇತ್ರಕ್ಕೆ ಸಿಟಿ ರವಿ ಅವರು ಲಾಬಿ ನಡೆಸಿದರು ಕೂಡ ಅವರಿಗೆ ಟಿಕೆಟ್ ಸಿಗದೇ ನಿರಾಸೆಯಾಗಿದೆ. ಅದೇ ರೀತಿ ಬೆಂಗಳೂರು ಉತ್ತರದಿಂದ ಸಂಸದರಾದಂತ ಡಿವಿ ಸದಾನಂದ ಗೌಡ ಅವರಿಗೆ ಟಿಕೆಟ್ ತಪ್ಪಿಸಿ ಆ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಡಲಾಗಿದೆ.

ಸಂಸದೆ ವಿರುದ್ಧ ಗೊ ಬ್ಯಾಕ್ ಅಭಿಯಾನ

ಗೋ ಬ್ಯಾಕ ಶೋಬಕ್ಕ ಅಭಿಯಾನ

ಸಂಸದೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಗರಿಂದ ಗೋ ಬ್ಯಾಕ್ ಶೋಭಕ್ಕ ಎಂಬ ಅಭಿಯಾನ ಭಾರಿ ಕುತೂಹಲ ಕೆರಳಿಸಿತ್ತು. ಕ್ಷೇತ್ರಕ್ಕೆ ಬಾರದ ಎಂಪಿ ನಮಗೆ ಬೇಡವೇ ಬೇಡ, ಎಂದು ಅಭಿಯಾನ ಆರಂಭಿಸಿದ ಬಿಜೆಪಿ ಕಾರ್ಯಕರ್ತರು. ಇನ್ನೇನು ಕ್ಷೇತ್ರದ ತುಂಬ ವಿರೋಧ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಸಂಸದೆ ಬೇರೆ ಕ್ಷೇತ್ರದ ಹುಡುಕಾಟಕ್ಕೆ ನಿರತರಾದರು.

ಹಾಲಿ ಸಂಸದ ಡಿವಿ ಸದಾನಂದಗೌಡರ ಬದಲಿಗೆ ಶೋಭಾ ಕರಂದ್ಲಾಜೆಗೆ ಟಿಕೆಟ್

ಹಾಲಿ ಸಂಸದ ಡಿವಿ ಸದಾನಂದ ಗೌಡರು ಪ್ರತಿನಿಧಿಸುವ ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ ಅವರು ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ. ಉಡುಪಿ ಚಿಕ್ಕಗಳೂರು ಕ್ಷೇತ್ರದಲ್ಲಿ ಸ್ವ ಪಕ್ಷಿಯರೆ ಗೊ ಬ್ಯಾಕ ಅಭಿಯಾನ ಆರಂಭಿಸಿದ ಹಿನ್ನಲ್ಲೆಯಲ್ಲಿ ಅವರು ಕ್ಷೇತ್ರವನ್ನು ಬದಲಾವಣೆ ಮಾಡಿದರು. ಇನ್ನೂ ಕೆಲವು ಪ್ರಭಾವಿ ನಾಯಕರು ಎಷ್ಟೆ ಲಾಭಿ ನಡೆಸಿದರು, ಕೇಂದ್ರದ ವರಿಷ್ಠರ ದುಂಬಾಲು ಬಿದ್ದರು ಸಹ ಟಿಕೆಟ್ ವಂಚಿತರಾಗಿದ್ದಾರೆ. ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರ್ ಮಗನಿಗೂ ಸಹ ಟಿಕೆಟ್ ಪಡೆಯಲು ವಿಫಲರಾಗಿದ್ದಾರೆ.

ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿ ಬೇರೇ ಕ್ಷೇತ್ರದಿಂದ ಸ್ಪರ್ಧಿಸುವ ಸಂಸದೆಗೆ ಟಿಕೆಟ್ ನೀಡಿದರ ಕುರಿತೂ ಬಾರಿ ಚರ್ಜೆಗೆ ಗ್ರಾಸವಾಗಿದೆ. ಘಟಾನುಘಟಿ ನಾಯಕರು ಟಿಕೆಟ್ ಪಡೆಯಲು ವಿಫಲರಾಗಿದ್ದರಿಂದ ಇನ್ನೂ ಬದಲಿ ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಿದ ಶೋಭಾ ಕರಂದ್ಲಾಜೆ ಪವರ್ಫುಲ್ ರಾಜಕಾರಣಿ ಅನ್ನುವಲ್ಲಿ ಸಂದೇಹವಿಲ್ಲ.