” Love at first Sight” ಎಂಬಂತೆ ಪ್ರೀತಿ ಅನ್ನೋದು ಯಾರ ಮೇಲೆ ಯಾವಾಗ ಬೇಕಾದ್ರೂ ಆಗಬಹುದು, ಪ್ರೀತೀ ಪ್ರೇಮದ ವಿಷಯಕ್ಕೆ ಸಂಬಂಧಿಸಿದಂತೆ ಅನಾದಿಕಾಲದಿಂದಲೂ ಸಾಕಷ್ಟು ಸಾವು ನೋವುಗಳು ಸಂಭವಿಸಿದ ಉದಾಹರಣೆಗಳು ಇವೆ. ಅದೇ ರೀತಿ ಪ್ರೀತಿಯಲ್ಲಿ ವಯಸ್ಸಿನ್ ಮೀತಿ ಸಹ ನೋಡದ ಕುರುಡ ಪ್ರೇಮ ಪ್ರಕರಣಗಳು ಸಹ ಸಾಕಷ್ಟು ಇವೆ. ಇಂತಹದೇ ಪ್ರೇಮ ಪ್ರಕರಣ ಕ್ಕೆ ಸಂಭಂದಿಸಿದಂತೆ ( 19 ) ವರ್ಷದ ಕಾಲೇಜಿನ ಯುವತಿ ಹಾಗೂ ( 50) ವರ್ಷದ ವಿವಾಹಿತ ಪುರುಷನ ಪ್ರೇಮ ಪ್ರಕರಣ ಸಾವಿನಲ್ಲಿ ಅಂತ್ಯವಾದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಾವತ್ತೂರಿನಲ್ಲಿ ನಡೆದಿದೆ.
ತುಮಕೂರು: ಪ್ರೇಮ ಎನ್ನುವುದು ಯಾರ ಮೇಲಾದರೂ ಆಗಬಹುದು. ಅದಕ್ಕೆ ವಯಸ್ಸಿನ್ ಮೀತಿ ಇಲ್ಲವೆಂಬುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಹೌದೂ ಆಕೀಗೇ ಈಗ ಕೇವಲ ( 19) ವರ್ಷ, ಇನ್ನು ಕಾಲೇಜು ಓದುತ್ತಿರುವ ಯುವತಿ ಆದರೆ ಅವಳಿಗೆ ( 50) ವರ್ಷದ ವಿವಾಹಿತ ಪುರುಷನ ಮೇಲೆ ಪ್ರೀತೀ ಹುಟ್ಟುತ್ತೆ, ಇವರಿಬ್ಬರ ಪ್ರೀತಿ ಮನೆಯವರ ಒಪ್ಪಿಗೆ ಕೇಳುವ ಮಟ್ಟಿಗೆ ಹೋಗುತ್ತದೆ. ಮನೆಯಲ್ಲಿ ಇವರಿಬ್ಬರ ಪ್ರೇಮಾಂಕುಶಕ್ಕೆ ಮನೆಯವರು ವಿರೋಧಿಸಿ ಬುದ್ಧಿ ಮಾತುಗಳನ್ನು ಹೇಳಿದ್ದರು ಆದರೆ ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿರುವುದರಿಂದ ಒಬ್ಬರನ್ನೊಬ್ಬರು ಬಿಟ್ಟು ಇರದಷ್ಟು ಆಳವಾದ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಹೀಗಾಗಿ ಕಳೆದ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಪರಾರಿಯಾಗಿದ್ದರು. ಇತ್ತ ಮನೆ ಬಿಟ್ಟು ತೆರಳಿದ ಸಂಬಂಧ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಆದರೆ ನಿನ್ನೆ ದಿನ ಮಾವತ್ತೂರು ಕೆರೆ ದಡದ ಮೇಲೆ ಇಬ್ಬರು ಚಪ್ಪಲಿ ಹಾಗೂ ಮೊಬೈಲ್ ಬಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಈ ಪ್ರಕರಣ ಕೋಳಾಲ್ ಹೋಬಳಿ ಲಕ್ಕಯ್ಯನ ಪಾಳ್ಯದ(19) ವರ್ಷದ ವಿದ್ಯಾರ್ಥಿನಿಯಾದ ಅನನ್ಯ ಹಾಗೂ ಬೈರಗೊಂಡ್ಲು ಗ್ರಾಮದ ( 50 ) ವಿವಾಹಿತಪುರುಷ ರಂಗ ಶಾಮಣ್ಣ ಮೃತ ಪ್ರೇಮಿಗಳಾಗಿದ್ದು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಇಬ್ಬರು ಮೃತ ದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿಗಳ ಸಹಾಯದಿಂದ ಹೊರತೆಗೆಯಲಾಗಿದೆ.